¡Sorpréndeme!

ರಾಜ್ಯದಲ್ಲಿ ಪೊಲೀಸ್, ಶಿಕ್ಷಕರ ನೇಮಕಾತಿ ಪರ್ವ | Public TV

2022-09-13 1 Dailymotion

ರಾಜ್ಯ ಸರ್ಕಾರ ಪೊಲೀಸ್ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. 3,064 ಕಾನ್ಸ್ ಟೇಬಲ್ ಹುದ್ದೆ, ಹಾಗೂ 2,996 ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್‍ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಇದೇ ಮೊದಲ ಬಾರಿಗೆ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯಲ್ಲಿ 68 ಪುರುಷ ತೃತೀಯ ಲಿಂಗಿಗಳ ನೇಮಕಾತಿಗೂ ಅವಕಾಶ ಕೊಟ್ಟಿರುವುದು ವಿಶೇಷ. ಇದಕ್ಕಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ತೃತೀಯ ಲಿಂಗ ವ್ಯಕ್ತಿಗಳ ನಿಯಮ(ರಕ್ಷಣಾ ಹಕ್ಕುಗಳು)2020ರ ಅನ್ವಯ ಪ್ರಮಾಣ ಪತ್ರ ಇರಬೇಕು. ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ರವರಿಂದ ಪ್ರಮಾಣ ಪತ್ರ ಪಡೆಯಬೇಕು. ಒಂದು ವೇಳೆ ಈ ಪ್ರಮಾಣ ಪತ್ರ ಇಲ್ಲದೆ ಹೋದರೆ ನೇಮಕಾತಿಗೆ ತೃತೀಯ ಲಿಂಗಿ ಮೀಸಲಾತಿ ಅನ್ವಯ ಆಗೋದಿಲ್ಲ. ಇನ್ನು ಇದರ ಮಧ್ಯೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೂ ಸರ್ಕಾರ ಮುಂದಾಗಿದೆ. 2200 ಜನ ಸಹ ಶಿಕ್ಷಕರು, 200 ಜನ ದೈಹಿಕ ಶಿಕ್ಷಕರು, 100 ಜನ ವಿಶೇಷ ಶಿಕ್ಷಕರ ನೇಮಕಾತಿ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

#publictv #bcnagesh